ನನ್ನ ತೊರೆದ ಪ್ರೀತಿಯ ಬಂಧ: A Poetic Response to 'My Grandmother’s House' – Navya D. N.
ನನ್ನ ತೊರೆದ ಪ್ರೀತಿಯ ಬಂಧ ಅಂದು ಪಡೆದ ಪ್ರೀತಿ ಇಂದು ನೆನಪಾಗಿದೆ ಮನೆಯಿಂದ ದೂರವಿದ್ದರೂ, ತನ್ನ ಅಜ್ಜಿ ಸತ್ತರೂ, ಪ್ರೀತಿ ಎಂದಿಗೂ ಅವರ ಕಣ್ಣಲ್ಲಿ ಅಮರ ಆ ಮನೆಯಲ್ಲಿ ಮೌನವಿದ್ದರೂ, ಮೌನದ ಭಾಷೆಯಲ್ಲಿಯೇ ಪ್ರೀತಿಯನ್ನು ಕಂಡವಳು ಅವಳು ಪುಸ್ತಕದ ಭಾವ ಅರಿಯದಿದ್ದರೂ ಅಜ್ಜಿಯ ಪ್ರೀತಿಯ ಭಾವ ಅರಿತವಳು ಆಹಾ! ಎಂತಹ ಅದ್ಭುತ ಹೋಲಿಕೆ ಚಂದ್ರನಲ್ಲಿ ಶಾಂತತೆಯನ್ನು ಕಾಣಬಯಸುವ ಮನಸು ಕೊನೆಯ ಪಕ್ಷ ಆ ಚಂದ್ರನ ತಂಪನ್ನಾದರೂ ಅನುಭವಿಸಲು ಬಯಸುವ ಮನ ಅವಳದು ಆ ಮನೆಯಲ್ಲಿರುವ ಕತ್ತಲನ್ನು ಬಾಚಿ ತರುವ ಅಸೆ ಅವಳಿಗೆ, ಆ ಕತ್ತಲೆಯಲ್ಲಾದರೂ ಅಜ್ಜಿಯ ಪ್ರೀತಿಯನ್ನು ಬಣ್ಣವಾಗಿಸುವ ಹಂಬಲ ಅವಳಿಗೆ ಪ್ರೀತಿಯನ್ನು ಬೇಡುವ ಅವಳಿಗೆ ಎಲ್ಲವನ್ನು ಕಳೆದುಕೊಂಡ ಅನಿಸಿಕೆ ಅವಳಲ್ಲಿ ಮೊಳೆತಿದೆ ಪ್ರೀತಿ, ನೆಮ್ಮದಿ ನೀಡಿದ ಮನೆ ಇಂದು ತನ್ನ ಅಜ್ಜಿಯ ಮರಣದಿಂದ ಕಾರ್ಮೋಡ ಆವರಿಸಿದಂತಾಗಿದೆ - ನವ್ಯಾ ಡಿ. ಎನ್ Inspired by her reading of My Grandmother’s House by Kamala Das, Navya D. N., II B.A. Optional English, Sahyadri Arts College, has composed a poem in Kannada. This creative response reflects how poetry transcends language, inspiring readers to interpret, feel and express literature in their own unique ways. An...