ನನ್ನ ತೊರೆದ ಪ್ರೀತಿಯ ಬಂಧ: A Poetic Response to 'My Grandmother’s House' – Navya D. N.


ನನ್ನ ತೊರೆದ ಪ್ರೀತಿಯ ಬಂಧ

ಅಂದು ಪಡೆದ ಪ್ರೀತಿ ಇಂದು ನೆನಪಾಗಿದೆ 

ಮನೆಯಿಂದ ದೂರವಿದ್ದರೂ, ತನ್ನ ಅಜ್ಜಿ ಸತ್ತರೂ, ಪ್ರೀತಿ ಎಂದಿಗೂ ಅವರ ಕಣ್ಣಲ್ಲಿ ಅಮರ 

ಆ ಮನೆಯಲ್ಲಿ ಮೌನವಿದ್ದರೂ, ಮೌನದ ಭಾಷೆಯಲ್ಲಿಯೇ ಪ್ರೀತಿಯನ್ನು ಕಂಡವಳು ಅವಳು 

ಪುಸ್ತಕದ ಭಾವ ಅರಿಯದಿದ್ದರೂ ಅಜ್ಜಿಯ ಪ್ರೀತಿಯ ಭಾವ ಅರಿತವಳು 

ಆಹಾ! ಎಂತಹ ಅದ್ಭುತ ಹೋಲಿಕೆ 

ಚಂದ್ರನಲ್ಲಿ ಶಾಂತತೆಯನ್ನು  ಕಾಣಬಯಸುವ ಮನಸು 

ಕೊನೆಯ ಪಕ್ಷ ಆ ಚಂದ್ರನ ತಂಪನ್ನಾದರೂ ಅನುಭವಿಸಲು ಬಯಸುವ ಮನ ಅವಳದು 

ಆ ಮನೆಯಲ್ಲಿರುವ ಕತ್ತಲನ್ನು ಬಾಚಿ ತರುವ ಅಸೆ ಅವಳಿಗೆ,

ಆ ಕತ್ತಲೆಯಲ್ಲಾದರೂ ಅಜ್ಜಿಯ ಪ್ರೀತಿಯನ್ನು ಬಣ್ಣವಾಗಿಸುವ ಹಂಬಲ ಅವಳಿಗೆ 

ಪ್ರೀತಿಯನ್ನು ಬೇಡುವ ಅವಳಿಗೆ ಎಲ್ಲವನ್ನು ಕಳೆದುಕೊಂಡ ಅನಿಸಿಕೆ ಅವಳಲ್ಲಿ ಮೊಳೆತಿದೆ 

ಪ್ರೀತಿ, ನೆಮ್ಮದಿ ನೀಡಿದ ಮನೆ ಇಂದು ತನ್ನ ಅಜ್ಜಿಯ ಮರಣದಿಂದ ಕಾರ್ಮೋಡ ಆವರಿಸಿದಂತಾಗಿದೆ

- ನವ್ಯಾ  ಡಿ. ಎನ್


Inspired by her reading of My Grandmother’s House by Kamala Das, Navya D. N., II B.A. Optional English, Sahyadri Arts College, has composed a poem in Kannada.

This creative response reflects how poetry transcends language, inspiring readers to interpret, feel and express literature in their own unique ways.

An original poetic expression inspired by a literary reading. Simple, yet heart-touching

Comments

Popular posts from this blog

Poem & Analysis of 'Australia' by A.D Hope

Poem & Analysis of 'If You Forget Me' by Pablo Neruda

Poem & Analysis of "Once Upon A Time" by Gabriel Okara